ನಿನ್ನೆ ರಾತ್ರಿ ಅಲೆದಾಡಲು ಹೋಗಿದ್ದ ಬದುಕನ್ನು ಹೊರಗೆ ಬಿಟ್ಟು, ನಾನೊಬ್ಬನೇ ಮನೆಯಲ್ಲಿ ಮಲಗಿದ್ದೆ. ಬದುಕು ಬಂದು ಮನೆ ಬಾಗಿಲು ಬಡಿದಾಗ ನಸುಕಿನ 4 ಗಂಟೆ. ಬಾಗಿಲು ತೆರೆದೆ. ಎಲ್ಲಿಗೆ ಹಾಳಾಗಿ ಹೋಗಿದ್ದೆ ಬದುಕೇ ಎಂದು ಸಿಟ್ಟಿನಿಂದ ಕೇಳಬೇಕೆನಿಸಿತು..!! ಪಾಪ ಬದುಕು, ಅದರ ಕಷ್ಟ ಅದಕ್ಕೆ ಅಂದುಕೊಂಡು ಸುಮ್ಮನಾದೆ. ಪುಟ್ಟ ಮಗುವೊಂದು ಅಮ್ಮನನ್ನು ತಬ್ಬಿ ಮಲಗುವ ಹಾಗೆ ನನ್ನನ್ನು ತಬ್ಬಿಕೊಂಡು ಬದುಕು ಮಲಗಿತು. ಈ ಊರಿನ ರಾತ್ರಿ ಗಲ್ಲಿಗಳಲ್ಲಿ ಅಲೆದಾಡಿ ಬಂದ ಬದುಕಿಗೆ ಅದೆಷ್ಟು ಅನಾಥ ಪ್ರಜ್ಞೆ ಕಾಡಿರಬೇಕೆಂದು ಯೋಚಿಸತೊಡಗಿದೆ. ನನಗೆ ನಿದ್ದೆ ಬರಲಲ್ಲಿ. ಇದರಿಂದ ನನಗೇನು ಬೇಸರವಾಗಲಿಲ್ಲ. ನನಗೂ ಮತ್ತು ಬದುಕಿಗೂ ಬಿಡಿಸಲಾರದ ನಂಟು. ಹುಟ್ಟಿದಾಗಿನಿಂದ ನನ್ನ ಜೊತೆಯೇ ಇದೆ. ಅಕ್ಕರೆಯ ಗೆಳೆಯನಾಗಿ, ಆತ್ಮ‌ ಬಂಧುವಾಗಿ, ನನ್ನ ನೋವಿಗೆ ಸಾಂತ್ವನವಾಗಿ… ನನ್ನೊಟ್ಟಿಗೆ ಬೆಳೆದಿದೆ. ಉಳಿದಿದೆ… ಅಳಿದಿದೆ… ಮತ್ತೆ ಚಿಗುರೊಡೆದಿದೆ. ಬದುಕಿಗಾಗಿ ನಾನು ಪರಿತಪಿಸಲಿಲ್ಲ. ಬದುಕನ್ನು ಬಿದ್ದು ಬೇಡಿಕೊಳ್ಳಲಿಲ್ಲ. ವಿಚಿತ್ರವೆಂದರೆ, ಬದುಕೆ ಬಂದು ನನ್ನ ಬೆನ್ನ ಹಿಂದಿನ ನೆರಳಿನಂತೆ ನನಗಾಸರೆಯಾಗಿ ನಿಂತಿತು.

pexels-photo-103123.jpeg

ನೋವನುಂಡ ನನ್ನ ಜೀವ ಎಂದೊ ಮುಗಿದುಹೋಗಬೇಕಿತ್ತು. ಆದರೆ, ಬದುಕು ಬಿಡಬೇಕಲ್ಲ… ಕಾಲದೊಂದಿಗೆ ಜಗಳಕ್ಕಿಳಿದ ಬದುಕು ಕಾಲದಿಂದಲೇ ಒಂದಷ್ಟು ಕಾಲವನ್ನು ಕಸಿದುಕೊಂಡು ನನ್ನ ಕೈಗಿಟ್ಟಿತು. ಹಲವು ಸಾರಿ ಬದುಕಿಗೂ, ನನಗೂ ಜಗಳವಾಗಿದೆ, ನಾವಿಬ್ಬರೂ ಮುನಿಸಿಕೊಂಡಿದ್ದಿದೆ. ತಪ್ಪು ಮಾಡಿದಾಗ ಒಬ್ಬರಿಗೊಬ್ಬರು ನಾಚಿಕೆ‌ಪಟ್ಟಿದ್ದಿದೆ. ನನ್ನಲ್ಲಿನ ಖದೀಮತನಗಳು, ಉಡಾಪೆಗಳು, ಪಾಪಗಳು ಹಾಗೂ ಬಲಹೀನತೆಗಳನ್ನು ಸಹಿಸಿಕೊಂಡ ಬದುಕು ಅದೆಷ್ಟು ನೊಂದಿರಬೇಕೆಂದು ಹಲವು ಬಾರಿ ಚಿಂತಿಸಿದ್ದೇನೆ. ನನಗೆ ಗೊತ್ತು, ಬರೀ ಚಿಂತಿಸಿದರೆ ಬದುಕಿನ ಋಣ ಮುಗಿಯಲಾರದು. ಇದರ ಋಣಭಾರದವನ್ನು ನನ್ನಿಂದ ತೀರಿಸಲೂ ಆಗದು. ಏಕೆಂದು ಗೊತ್ತಿಲ್ಲ, ಈಗ ಮಗುವಿನಂತೆ ನನ್ನನ್ನು ತಬ್ಬಿ ಮಲಗಿರುವ ಬದುಕಿನ ತಲೆ ಮೇಲೆ ಅಮ್ಮನ ಹಾಗೆ ಕೈಯಾಡಿಸುತ್ತಿದ್ದೇನೆ. ಅದರ ಬೆರಳುಗಳನ್ನು ಸ್ಪರ್ಶಿಸಿ ದೈವಾನೂಭೂತಿಯ ಪವಿತ್ರ ಸುಖದಲ್ಲಿ ಮುಳುಗಿಹೋಗುತ್ತಿದ್ದೇನೆ. ತಣ್ಣಗೆ ಮಲಗಿರುವ ಬದುಕಿನ ಹಣೆಗೆ ಮುತ್ತು ಕೊಟ್ಟು ಸಾಕ್ಷಾತ್ಕಾರದ ಪ್ರತಿಫಲನದಲ್ಲಿ ಪತನಗೊಳ್ಳುತ್ತಿದ್ದೇನೆ.

ನಾನು ಮಾಡಿದ ಅದೇಷ್ಟೋ ಗಾಯಗಳು ಬದುಕಿನ ಎದೆ ಮೇಲೆ ಅಳಿಸದ ನೆನಪುಗಳಾಗಿ ಉಳಿದುಹೋಗಿವೆ. ಬದುಕೇ, ನನ್ನನ್ನು ಕ್ಷಮಿಸಿಬಿಡು ಎಂದು ಕೇಳಿದಾಗಲೊಮ್ಮೆ… ”ನಾ ನಿನ್ನ ನೆರಳು, ನೆರಳಿಗೆ ಕ್ಷಮಿಸುವ ಹಂಗಿಲ್ಲ, ನೆರಳಿಗೆ ಕ್ಷಮಿಸುವ ಹಕ್ಕಿಲ್ಲವೆಂದು” ಮಾತು ಮುಗಿಸುತ್ತದೆ ಬದುಕು.

pexels-photo-625458.jpeg

ಇಲ್ಲಿ ಯಾರಿಗೆ ಯಾರು ನೆರಳು, ಯಾರಿಗೆ ಯಾರು ಆಸರೆ… ನನಗೆ ಬದುಕು ನೆರಳಾ…? ಬದುಕಿಗೆ ನಾನು ನೆರಳಾ…? ನಾನು ಬದುಕಿಗೆ ಆಸರೆಯಾ…? ಬದುಕು ನನಗಾಸರೆಯಾ…? ಯಾರದು ಮುಂದಿನ ಹೆಜ್ಜೆ…? ಯಾರದು ಹಿಂದಿನ ಹಜ್ಜೆ…? ಒಂದೂ ತಿಳಿಯದಾಗಿದೆ ನನಗೆ.

ಯಾರು ತೊರೆದರೂ, ಸಾವು ಬಂದರೂ, ನನ್ನೊಂದಿಗಿರುವ ಬದುಕೆ, ನನ್ನೊಟ್ಟಿಗೆ ಕೊನೆಯಾಗುವ ಬದುಕೆ… ನಿನಗೆ ನಾನು ಋಣಿ.

sea-beach-holiday-vacation.jpg

I love you my dear life….

haddhaiyaar..✍️✍️

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

C L Belcher

Poetry, writing, and photography

Evil Squirrel's Nest

Where all the cool squirrels hang out!

LosAngelesMade

The official Los Angeles Made | Made In LA Blog

My Inspired Fibro Life

Finding Inspiration in Every Day Life

Up Close To Flowers

Everyone likes Flowers

robert j cooney

Accept the Uncommon

On The Road With Jim And Mary

This is a photo from my 1,000+ favorite photos folder. It was taken in Vicksburg, Mississippi, April, 2013.

Su meile iš Argentinos

Apie gyvenimą Argentinoje

The Showers of Blessings

Giving and Receiving Blessings

Streets of Nuremberg

Street | Urban | Travel | Photography by Marcus Puschmann

Image Earth Travel

Travel and photography blog by Nilla Palmer. Capturing the globe with words and lens. Come travel the world!

Quiet Captures by Sarah

Quietly capturing moments otherwise lost in time.

SIMPLY 100

Simply 100

Everchanging Perspective

All photos are but a point in time in a continually changing world.

Phil Ebersole's Blog

thoughts about politics and the passing scene

Mike Powell

My journey through photography

%d bloggers like this: